ಹೊಳೆಹೊನ್ನೂರು: ಪಟ್ಟಣದ ಚನ್ನಗಿರಿ ರಸ್ತೆಯಲ್ಲಿ ಮಾ.27ರ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಸ್ತಗಿರ್ (32) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ದಸ್ತಗಿರ್ ಅವರು ನೃಪತುಂಗ ವೃತ್ತದ ಕಡೆಯಿಂದ ಮನೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಎದುರು ಹೋಗುತ್ತಿರುವ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದು ಬಲಭಾಗಕ್ಕೆ ಬೀಳುವ ವೇಳೆಗೆ ಪಕ್ಕದಲ್ಲಿ ಹೋದ ಅಪರಿಚಿತ ವಾಹನಕ್ಕೆ ತಲೆ ಬಡಿದಿದೆ.
ಆಗ ಅಲ್ಲೇ ಬಿದ್ದ ಅವರ ತಲೆಗೆ ಬಲವಾದ ಪೆಟ್ಟಾಗಿದ್ದು ಸ್ಥಳದಲ್ಲೇ ತೀವ್ರ ರಸ್ತಸ್ರಾವ ಆಗಿ ಅಸ್ವಸ್ಥರಾಗಿದ್ದರು.
ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯೆ ಅಸುನೀಗಿದ್ದಾರೆ.
ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.














