ಶಿವಮೊಗ್ಗ: ವೈಯಕ್ತಿಕ ಲಾಭಕ್ಕಾಗಿ ಬಿಜೆಪಿಗೆ ಮರುಸೇರ್ಪಡೆಯಾಗುವ ಉದ್ದೇಶ ನನಗಿಲ್ಲ. ಪಕ್ಷದ ಬಲವರ್ಧನೆ ಹಾಗೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಆಶಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಇದನ್ನೂ ಓದಿ > > ಶಿವಮೊಗ್ಗದಲ್ಲಿ ಗೋಸೇವಾ ಸಂಭ್ರಮ, ಸಾವಯವ ಗೊಬ್ಬರ, ಗೋ ಉತ್ಪನ್ನಗಳ ಪ್ರದರ್ಶನ
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷದ ಬಲವರ್ಧನೆಗೆ ಒತ್ತು ನೀಡುವುದರ ಜೊತೆಗೆ ಬಿಜೆಪಿಯಿಂದ ದೂರ ಉಳಿದಿರುವ ಸಿದ್ಧಾಂತವಾದಿಗಳನ್ನು ಮತ್ತೆ ಒಗ್ಗೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ > >ಶಿವಮೊಗ್ಗ, ಬ್ರಾಹ್ಮಣ ಸಮಾಜದಿಂದ ಸಾಮೂಹಿಕ ತಿಲತರ್ಪಣ ಕಾರ್ಯಕ್ರಮ
ವೈಯಕ್ತಿಕ ಲಾಭಕ್ಕಿಂತ ಪಕ್ಷದ ಸಿದ್ಧಾಂತ ಮತ್ತು ಸಂಘಟನೆಯ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂಬ ನಿಲುವು ವ್ಯಕ್ತಪಡಿಸಿದ ಅವರು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ತಮ್ಮ ಆಶಯವಾಗಿದೆ ಎಂದು ತಿಳಿಸಿದರು.














