ಶಿವಮೊಗ್ಗ: ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಪವನ್, ಪುನೀತ್, ಅವಳಿ ಸಹೋದರರು,ದೇಶದ ಪ್ರಮುಖ ಆಟಗಾರರಾಗುವ ಭರವಸೆ ಮೂಡಿಸಿದ್ದಾರೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಅವಳಿ ಸಹೋದರರು,10ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದು, ಆಟದ ಜೊತೆಗೆ ಓದಿನಲ್ಲಿಯೂ ಮುಂದಿದ್ದಾರೆ.
ಪುನೀತ್.ಎಸ್. ಮತ್ತು ಪವನ್.ಎಸ್.ಬೆಂಗಳೂರಿನಲ್ಲಿ ನಡೆದಂತಹ 19ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಇದೇ ತಿಂಗಳು 3 ರಿಂದ 10 ರವರೆಗೆ ನಡೆದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆಗಳು.
ಇದನ್ನೂ ಓದಿ > ತಂತಿ ಬೇಲಿ ಹಾರುವಾಗ ಆಯಾತಪ್ಪಿ ಬಿದ್ದು ಕಾಡೆಮ್ಮೆ ಸಾವು
ರಾಷ್ಟ್ರೀಯ ಡಬಲ್ಸ್ ರ್ಯಾಂಕಿಂಗ್ ನಲ್ಲಿ ರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ, ಚಾಕ ಚಕ್ಕತೆಯ ಆಟದ ಪ್ರದರ್ಶನ ನೀಡಿ, ಡಬಲ್ಸ್ ನಲ್ಲಿ ಅಂತಿಮ ಪಂದ್ಯದಲ್ಲಿ ಅಸ್ಸಾಮಿನ ಅನಯನ್ ಬೋರ್ ಮತ್ತು ಕೇರಳದ ಬಿಜಾರ್ನ್ ಜೈಸನ್ ರನ್ನು, 21-19,21-10 ರ ಅಂತರದಿಂದ ಸೋಲಿಸಿ, ಮಿಕ್ಸಡ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು.ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕ, 82 ಸಾವಿರ ನಗದು ಬಹುಮಾನ ಪಡೆದು, ಜಿಲ್ಲೆ ಮತ್ತು ರಾಜ್ಯಕ್ಕೆ ಹಾಗೂ ಸಂಸ್ಥೆಯ ಮಡಿಲಿಗೆ ಕೀರ್ತಿ ತಂದು ಕೊಟ್ಟಿರುತ್ತಾರೆ.
ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ್ಯಾಂಕಿಂಗ್ ನಲ್ಲಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದು,ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಮುಂದಿನ ತಿಂಗಳು ಜೂನ್ 26 ರಿಂದ ಜಪಾನ್ ನಲ್ಲಿ ನಡೆಯುವ ಅಂಡರ್ 19 ವಯೋ ಮಿತಿಯೊಳಗಿನ ಏಷ್ಯನ್ ಗೇಮ್ಸ್ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಪರವಾಗಿ ಆಡಲಿದ್ದಾರೆ.
ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುತ್ತಾರೆ. ಇವರು ಪ್ರಸ್ತುತ ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ಶ್ರೀ ಮಧುಸೂಧನ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಕ್ರೀಡೆಯ ಜೊತೆಗೆ ಓದಿನಲ್ಲೂ ಪ್ರತಿಭಾನ್ವಿತ ರಾಗಿರುತ್ತಾರೆ
ಈ ಕ್ರೀಡಾ ಪ್ರತಿಭೆಗಳು ರಾಷ್ಟ ಮತ್ತು ಅಂತರ್ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
ಜಿಲ್ಲಾ ಮಟ್ಟದಿಂದ ವಿಭಾಗ, ರಾಜ್ಯ, ರಾಷ್ಟ್ರಮಟ್ಟದವರೆಗೂ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಾ ಬಂದ ಈ ಪ್ರತಿಭಾನ್ವಿತರು ಅಂತರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸುವ ಅವಕಾಶ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.
ಹೀಗೆ ವಿವಿಧ ಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ಸು ಸಾಧಿಸುತ್ತಾ ಬಂದಿರುವ ಈ ಪ್ರತಿಭಾನ್ವಿತರು ಅಂತರಾಷ್ಟ್ರೀಯ ಕ್ರೀಡಾಪಟುವಾಗುವ ಆಸೆಯಿದೆ.
ಅನೇಕ ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ,ಅಕ್ಟೊಬರ್ ತಿಂಗಳಿನಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಪಂದ್ಯಾವಳಿಯಲ್ಲಿ ಭಾಗವಹಿಸಿರುತ್ತಾರೆ.ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಬಹುಮಾನಗಳನ್ನು ಸಂಪಾದಿಸಿರುವ ಅವಳಿ ಸಹೋದರರು ಭವಿಷ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನಗಳಿಸಿ,ಉತ್ತಮ ಆಟಗಾರ ರಾಗಬೇಕು. ಒಲಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸುವುದು ನಮ್ಮ ಮುಂದಿನ ಮಹಾನ್ ಗುರಿ ಎನ್ನುವ ಅವಳಿ ಸಹೋದರರಿಗೆ ಗುಡ್ ಲಕ್ ಹೇಳೋಣವೇ.














