• About Us
  • Advertise
  • Privacy & Policy
  • Contact Us
Thursday, September 3, 2026
ರಾಕೇಶ್ ಸೋಮಿನಕೊಪ್ಪ ಸಾರಥ್ಯದಲ್ಲಿ
yuvadhwani
Subscribe
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
  • Home
  • ಶಿವಮೊಗ್ಗ
    • ಹೊಸನಗರ
    • ತೀರ್ಥಹಳ್ಳಿ
    • ಸಾಗರ
    • ಭದ್ರಾವತಿ
    • ಶಿಕಾರಿಪುರ
    • ಸೊರಬ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
No Result
View All Result
yuvadhwani
No Result
View All Result
  • Home
  • ಶಿವಮೊಗ್ಗ
  • ರಾಜ್ಯ
  • ಆರೋಗ್ಯ
  • ಅಂಕಣಗಳು
  • ಕ್ರೈಂ ನ್ಯೂಸ್
  • ರಾಶಿ ಭವಿಷ್ಯ
  • ವಿಶೇಷ
  • ಅಡಿಕೆ ಧಾರಣೆ
Home Uncategorized

ಶಿವಮೊಗ್ಗ ನಗರದಲ್ಲಿ ಸರಣಿ ಅಪಘಾತಕ್ಕೆ ಕಾರಣ ಯಾರು?

ರಾಕೇಶ್ ಸೋಮಿನಕೊಪ್ಪ by ರಾಕೇಶ್ ಸೋಮಿನಕೊಪ್ಪ
April 1, 2026
in Uncategorized, ವಿಶೇಷ
ಶಿವಮೊಗ್ಗ ಬಸ್‌ ಸ್ಟ್ಯಾಂಡ್‌ ಬಳಿ ಸರಣಿ ಅಪಘಾತ, ಕಾರು ಬಸ್ ನಡುವೆ ಸಿಲುಕಿದ ಆಟೋ ನಜ್ಜಗುಜ್ಜು? ಹೇಗಾಯ್ತು ಘಟನೆ?
Share on FacebookShare on TwitterShare on WhatsApp

ವಿಶೇಷ ಲೇಖನ | ರವಿಕುಮಾರ್ ಕೆಎಂ, ಹವ್ಯಾಸಿ ಬರಹಗಾರರು

ಶಿವಮೊಗ್ಗ:  ನಗರದ ಬಸ್ ನಿಲ್ದಾಣ ಬಳಿ ನಿನ್ನೆ ಭೀಕರ ಅಪಘಾತ ಸಂಭವಿಸಿದ್ದು ಇದಕ್ಕೆ ಮೂಲವಾಗಿ ಕಾರಣ ಯಾರು? ಹೊಣೆಯನ್ನು ಹೊತ್ತಿಕೊಳ್ಳಬೇಕಾದ ಇಲಾಖೆ ಯಾವುದು? ಎಂಬುದೇ ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವ ಪ್ರತಿನಿತ್ಯದ ಶಾಪಗ್ರಸ್ತವಾದ ಪ್ರಶ್ನೆಗಳಾಗಿವೆ?
ಅಂದ ಮಾತ್ರಕ್ಕೆ ನಗರದಲ್ಲಿ ನಡೆದ ಅಪಘಾತಗಳು ಇದೇ ಮೊದಲಲ್ಲ. ಅದೆಷ್ಟೋ ಅಪಘಾತಗಳು ಪ್ರಮುಖ ವೃತ್ತಗಳಲ್ಲಿ ನಡೆದಿರುವುದು ಭಯಾನಕವಾದ ಸಂಗತಿಯಾಗಿದೆ.

ಇದನ್ನೂ ಓದಿ > ಶಿವಮೊಗ್ಗ ಬಸ್‌ ಸ್ಟ್ಯಾಂಡ್‌ ಬಳಿ ಸರಣಿ ಅಪಘಾತ, ಕಾರು ಬಸ್ ನಡುವೆ ಸಿಲುಕಿದ ಆಟೋ ನಜ್ಜಗುಜ್ಜು? ಹೇಗಾಯ್ತು ಘಟನೆ?

ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ ಇದರ ನಡುವೆ ಅಪಘಾತಗಳು ಕೂಡ ಹೆಚ್ಚಾಗಿದ್ದು ಭಾರೀ ವಾಹನಗಳ ಅವಸರದ ಚಾಲನೆಯೋ, ಇಲ್ಲ ಅಜಾಗರೂಕತೆಯ ಚಾಲನೆಯೋ ಏನೋ ಒಟ್ಟಿನಲ್ಲಿ ಸಣ್ಣ ಪ್ರಮಾಣದ ವಾಹನ ಸವಾರರಿಗೆ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲಂತೂ ಪಾದಚಾರಿಗಳ ಕಷ್ಟ ಹೇಳಲಾಗದು ಸಮಸ್ಯೆಯನ್ನು ಅನುಭವಿಸಿದವರಿಗೆ ಗೊತ್ತು. ಒಂದು ಬಾರಿ ರಸ್ತೆಗೆ ಇಳಿದರೆ ಮನೆ ಸೇರುವುದು ಅಷ್ಟು ಸುಲಭವಲ್ಲ ಆ ರೀತಿಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ನರ್ತನವು ನಡೆದು ಕೊನೆಗೆ ಅಪಾಯದ ದರ್ಶನವಾಗುತ್ತದೆ.

ಇನ್ನು ವಯಸ್ಸಾದವರು, ರೋಗಿಗಳು, ಶಾಲಾ ಮಕ್ಕಳು, ಸ್ತ್ರೀಯರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜೀವಕ್ಕೆ ಬೆಲೆ ಇಲ್ಲ, ಡ್ರೈವಿಂಗ್ ಕ್ರೇಜ್ ಗೆ ಬೆಲೆಯಿದೆ ಎಂದೆನಿಸುತ್ತದೆ.
ಸಮಯದ ಅಭಾವದಿಂದ ಎಲ್ಲರೂ ಅವಸರವಾಗಿ ಹೋಗುವಂತಿದ್ದು, ಚಾಲನೆ ಮಾಡುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಆ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಪೋಲಿಸ್ ಇಲಾಖೆಯು ಇತ್ತೀಚೆಗೆ ಹತ್ತು ಹಲವು ರೀತಿಯಲ್ಲಿ ವಾಹನ ಸವಾರರಿಗೆ ನಿಯಮಗಳನ್ನು ಪಾಲಿಸುವುದು ಹೇಗೆ ಎಂದು ಸಾರ್ವಜನಿಕವಾಗಿ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಹಾಗೆಯೇ ನಗರದಲ್ಲಿ 14 ಪ್ರಮುಖ ವೃತ್ತಗಳಲ್ಲಿ, ಹಂಪ್ಸ್’ಗಳು ಇರುವ ಕಡೆಗಳಲ್ಲಿ ಸೋಲಾರ್ ಸ್ಟಡ್’ಗಳನ್ನು ಅಳವಡಿಸಿ ರಾತ್ರಿ ನಡೆಯುವ ಅಪಘಾತಗಳು ತಡೆಗಟ್ಟಲು ಪಣತೊಟ್ಟಿದ್ದಾರೆ. ಇನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಸವಾರರಿಗೆ ITMS (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ಇ- ಚಲನ್ ವ್ಯವಸ್ಥೆಯಲ್ಲಿ ದಂಡ ಹಾಕುವುದರ ಜೊತೆಯಲ್ಲಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಗಾಳಿಗೆ ತೂರಿ ಹಿಂದಕ್ಕೆ ಒರೆಸಿಕೊಂಡು ಇನ್ನೊಬ್ಬರ ಜೀವಕ್ಕೆ ಕುತ್ತು ತರುವ ಸವಾರರಿಗೆ ಇದಷ್ಟೇ ಅಲ್ಲದೇ ಇನ್ನು ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾಗಿದೆ. ಏಕೆಂದರೆ, ಅವರ ಕ್ರೇಜ್ ಇನ್ನೊಂದು ಜೀವ ತೆಗೆಯುವ ಹಕ್ಕು ಯಾರಿಗೂ, ಯಾವನಿಗೂ ಇಲ್ಲ.
ಇಷ್ಟೆಲ್ಲ ನಿಯಮಗಳನ್ನು ಮಾಡಿದರೂ ಕೂಡ ಅಪಘಾತಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಇದು ಪೋಲಿಸ್ ಇಲಾಖೆಗೆ ಪ್ರತಿನಿತ್ಯದ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ >ಶಿವಮೊಗದಲ್ಲಿ ಮಧ್ಯರಾತ್ರಿ ಮಳೆಯ ಅವಾಂತರ, ಎಲ್ಲೆಲ್ಲಿ ಏನೇನಾಯ್ತು?

ಅವಸರವೇ ಅಪಘಾತಕ್ಕೆ ಕಾರಣ
ಇದು ವಾಹನ ಸವಾರರಿಗೆ ದಿನನಿತ್ಯದ ಗೋಳಾಗಿದೆ. ಎದುರುಗಡೆ, ಅಕ್ಕ-ಪಕ್ಕದಿಂದಲೂ ಯಾವುದೋ ರೂಪದಲ್ಲಿ ಅಪಘಾತಕ್ಕೆ ನೇರವಾಗಿ ಕಾರಣವಾಗುತ್ತಿರುವುದು ಪ್ರಮುಖ ವೃತ್ತಗಳಲ್ಲಿನ ಅವೈಜ್ಞಾನಿಕ, ಅಸಡ್ಡೆಯ ಕೆಂಪು, ಹಳದಿ, ಹಸಿರು ತೋರಿಸುವ ಸಿಗ್ನಲ್. ಯಾಕೆಂದರೆ, ನಗರದ ರೈಲ್ವೆ ನಿಲ್ದಾಣ ಬಳಿ ಇರುವ ಸಿಗ್ನಲ್ ವೃತ್ತದಲ್ಲಿ ಟೈಮರ್ ವಾಹನ ಸವಾರರಿಗೆ ಕಾಣಿಸುವಂತೆ ಇರುವುದು ಬಿಟ್ಟರೆ ನಗರದ ಬೇರೆ ವೃತ್ತದಲ್ಲಿ ಈ ಟೈಮರ್ ಇದ್ದು ಇಲ್ಲದಂತಾಗಿದೆ. ಇದರಿಂದಾಗಿ ಸಿಗ್ನಲ್ ಬಿಡುತ್ತದೆ, ಬೀಳುತ್ತದೆ ಎನ್ನುವಂತ ಗಾಬರಿ ಹಾಗೂ ಅವಸರದಲ್ಲಿ ಸಿಗ್ನಲ್ ಜಂಪ್ ಮಾಡಿ ಅಪಘಾತ ಕಾರಣ ಆಗಿರುವುದು ಹೆಚ್ಚಿನ ಸಂಖ್ಯೆಯಲ್ಲಿವೆ.
ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಅಡಗೂಲಜ್ಜಿ ಕಾಲದ ತಂತ್ರಜ್ಞಾನದಲ್ಲಿ ಇದ್ದು ದಂಡ ಕಟ್ಟಿಸಿಕೊಳ್ಳುವವುದು ಮುಖ್ಯವಾಗಬಾರದು. ಬದಲಾಗಿ ಇನ್ನಾದರೂ ಎಚ್ಚೆತ್ತುಕೊಂಡು ನಗರದ ಎಲ್ಲಾ ವೃತ್ತದಲ್ಲಿ ಸಿಗ್ನಲ್ ಕಡೆ ಟೈಮರ್, ಸೆಕೆಂಡ್, ನಿಮಿಷದ ಅಂಕೆಗಳು ಕಾಣುವಂತೆ ಮಾಡಿದರೆ ಅವಸರದಿಂದ ಸಿಗ್ನಲ್ ಜಂಪ್ ಮಾಡಿ ಅಪಘಾತ ಸಂಭವಿಸುವ ಇನ್ನೊಂದು ಜೀವ ತೆಗೆಯುವ ಕೆಲಸ ಆಗುವುದಿಲ್ಲ.
ಪೋಲಿಸ್ ಇಲಾಖೆಯ ಕೆಲಸಕ್ಕೆ ನಾವು ಸದಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ಇದೊಂದು ಕೆಲಸವಾದರೆ ಸ್ವಲ್ಪೇ ಸ್ವಲ್ಪ ಮಟ್ಟಿಗೆ ಸಣ್ಣ ಪ್ರಮಾಣದ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಬಹುದು.

Tags: kannada newskannada news livewho-is-responsible-for-the-series-of-accidents-in-shivamogga-cityಶಿವಮೊಗ್ಗ
Previous Post

ಹೊಸನಗರ, ಹೈಸ್ಕೋಲ್ ವಿದ್ಯಾರ್ಥಿಗಳಿಂದ ತಹಶೀಲ್ದಾರ್‌ಗೆ ಮನವಿ, ಕಾರಣವೇನು?

Next Post

ಮಳೆಬಾಧಿತ ಬಡಾವಣೆಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ, ನೀಡಿದ ಸೂಚನೆಗಳೇನು?, ಆಯುಕ್ತರು ಹೇಳಿದ್ದೇನು?

ರಾಕೇಶ್ ಸೋಮಿನಕೊಪ್ಪ

  • Trending
  • Comments
  • Latest
ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

ನ್ಯಾಷನಲ್ ಪಬ್ಲಿಕ್ ಶಾಲೆಯ ಸಾಧನೆ, ಸಿಬಿಎಸ್ಇ 10ನೇ ತರಗತಿಯಲ್ಲಿ 100% ಫಲಿತಾಂಶ

April 16, 2026
ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ

April 24, 2026
ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

ಹೊಳೆಹೊನ್ನೂರು, ಸಿಕ್ಕ ಬಂಗಾರ ಮರಳಿಸಿದ ತಂದೆ, ಮಗ!

July 10, 2026
ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

ಜೆ.ಎನ್.ಎನ್.ಸಿ.ಇ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’

April 25, 2026
ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು

4
ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು, ಆಗಿದ್ದೇನು?

4
ಶಿಕಾರಿಪುರ | ಶಾಲಾ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕ

ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?

3
ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?

3
ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026
ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!

September 2, 2026
ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

ಶಾಲಾ ಕ್ರೀಡಾಕೂಟದಲ್ಲಿ ಅನಾಹುತ, ಡಿಸ್ಕಸ್ ತಲೆಗೆ ಬಿದ್ದು ದೈಹಿಕ ಶಿಕ್ಷಕನಿಗೆ ಗಂಭೀರ ಗಾಯ!

September 2, 2026

Recent News

Facebook Twitter
yuvadhwani

ಶಿವಮೊಗ್ಗ ಸುದ್ದಿಗಳ ಜೊತೆಗೆ ರಾಜ್ಯದ ಪ್ರಚಲಿತ ವಿದ್ಯಮಾನಗಳ ಸುದ್ದಿಗಳನ್ನು ಓದಲು ಯುವಧ್ವನಿ ನ್ಯೂಸ್ ಪೋರ್ಟಲ್ ಗೆ ತಮಗೆ ಸುಸ್ವಾಗತ. ವಿಭಿನ್ನ, ವಿಶೇಷ, ಉತ್ತಮ ಗುಣಮಟ್ಟದ ಸುದ್ದಿಗಳನ್ನು ಓದುಗ ಮನಸ್ಸುಗಳಿಗೆ ಮುಟ್ಟಿಸಲು ಬದ್ದರಾಗಿದ್ದೇವೆ.

Follow Us

Browse by Category

  • Uncategorized
  • what is the reason?
  • ಅಂಕಣಗಳು
  • ಆರೋಗ್ಯ
  • ಕ್ರೈಂ ನ್ಯೂಸ್
  • ತೀರ್ಥಹಳ್ಳಿ
  • ದೇಶ
  • ಭದ್ರಾವತಿ
  • ರಾಜ್ಯ
  • ವಿಶೇಷ
  • ಶಿಕಾರಿಪುರ
  • ಶಿವಮೊಗ್ಗ
  • ಸಾಗರ
  • ಸೊರಬ
  • ಹೊಸನಗರ

Recent News

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

ನೀರಿನಲ್ಲಿ ಅಡಗಿ ಕುಳಿತ ಆರೋಪಿ, ಹೆಡೆಮುರಿ ಕಟ್ಟಿದ ಭದ್ರಾವತಿ ಪೊಲೀಸ್

September 3, 2026
ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ

September 3, 2026

Copyright © 2026 Yuva Dhwani. Designed by KIPL