ಶಿವಮೊಗ್ಗ: ಪ್ರೀ-ಪೇಯ್ಡ್ ಆಟೋ ದರಕ್ಕಿಂತ ಹೆಚ್ಚುವರಿ ಹಣ ಬೇಡಿಕೆ ಇಟ್ಟ ಆಟೋವನ್ನು ಪೊಲೀಸರು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ > > ಚಾಕು ತೋರಿಸಿ ದರೋಡೆ, ಇಬ್ಬರನ್ನು ಬಂಧಿಸಿದ ಪೊಲೀಸರು!
ಆಗಸ್ಟ್ 21ರಂದು ರಾತ್ರಿ 7.30ರ ಸುಮಾರಿಗೆ ನಗರದ ರೈಲ್ವೆ ನಿಲ್ದಾಣದಿಂದ ಕಾಶಿಪುರಕ್ಕೆ ಪ್ರಯಾಣಿಸಲು ಪ್ರಯಾಣಿಕರೊಬ್ಬರು ಪ್ರೀ-ಪೇಯ್ಡ್ ಆಟೋ ಟಿಕೆಟ್ ಪಡೆದಿದ್ದರು. ಟಿಕೆಟ್ನಲ್ಲಿ ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚುವರಿಯಾಗಿ 40 ಹಣವನ್ನು ನೀಡುವಂತೆ ಸಂಬಂಧಿಸಿದ ಆಟೋ ಚಾಲಕ ಪ್ರಯಾಣಿಕರಿಗೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ, ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ > > ಹೊಸನಗರ, ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ
ದೂರಿನ ಹಿನ್ನೆಲೆಯಲ್ಲಿ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದ್ದು, ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ > > ಬೈಕ್ ಮೇಲೆ ಕುಳಿತ ಮುಷ್ಯ, ಬೀಗ ಆನ್ ಮಾಡಿದ ಯುವಕನಿಗೆ ಕಾದಿತ್ತು ಶಾಕ್!
ಪ್ರೀ-ಪೇಯ್ಡ್ ಆಟೋ ಸೇವೆಯಲ್ಲಿ ನಿಗದಿಪಡಿಸಿದ ದರವನ್ನು ಮೀರಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ತಡೆಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.














