ಶಿವಮೊಗ್ಗ: ನಗರದ ಕಾಶಿಪುರ ಬಡಾವಣೆಯಲ್ಲಿ ತನ್ನ ಬೈಕ್ ಮೇಲೆ ಬಂದು ಕುಳಿತಿದ್ದ ಕೋತಿಯೊಂದು (ಮುಷ್ಯ) ಬೈಕ್ ಸ್ಟಾರ್ಟ್ ಮಾಡಲು ಬೀಗ ಆನ್ ಮಾಡಲು ಹೋದ ವೇಳೆ ಏಕಾಏಕಿ ಯುವಕನ ಕೈಗೆ ಬಾಯಿ ಹಾಕಿದೆ.
ಇದನ್ನೂ ಓದಿ > > ದೋಷಯುಕ್ತ ಮೊಬೈಲ್ ಕೊಟ್ಟ ಕಂಪನಿಗೆ ಶಾಕ್, ಬಡ್ಡಿ ಸಮೇತ ಪರಿಹಾರ ನೀಡಲು ಆದೇಶ!
ಅನಿರೀಕ್ಷಿತವಾಗಿ ಕೋತಿ (ಮುಷ್ಯ) ದಾಳಿ ನಡೆಸಿದ್ದರಿಂದ ಯುವಕ ಕೆಲಕಾಲ ಗಾಬರಿಗೊಂಡಿದ್ದಾನೆ. ಕೈ ಬಿಡಿಸಿಕೊಳ್ಳಲು ಪ್ರಯತ್ನಿಸುವಷ್ಟರಲ್ಲಿ ಮುಷ್ಯ ತೀವ್ರವಾಗಿ ದಾಳಿ ನಡೆಸಿರುವ ದೃಶ್ಯವು ಮೊಬೈಲ್ನಲ್ಲಿ ಸೆರೆಯಾಗಿದೆ. ಯುವಕನ ಕೈಗೆ ಗಂಭೀರ ಗಾಯವಾಗಿದೆ. ರಕ್ತಸ್ರಾವವಾದ ಬಳಿಕವಷ್ಟೇ ಮುಷ್ಯ ಗಂಭೀರವಾಗಿ ದಾಳಿ ನಡೆಸಿರುವುದು ಯುವಕನ ಗಮನಕ್ಕೆ ಬಂದಿದೆ. ಕೈಗೆ ಗಾಯಗೊಳಿಸಿದ ನಂತರ ಮುಷ್ಯ ಕ್ಷಣಾರ್ಧದಲ್ಲೇ ಅಲ್ಲಿಂದ ಪರಾರಿಯಾಗಿದೆ.
ಇದನ್ನೂ ಓದಿ > > ಅಡಿಕೆ ತೋಟಕ್ಕೆ ನುಗ್ಗಿದ ಬಸ್, ಓರ್ವ ಸಾವು, | ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಮುಷ್ಯ ದಾಳಿಯಿಂದ ಗಾಯಗೊಂಡ ಕಾಶಿಪುರ ಬಡಾವಣೆಯ ಹುಚ್ಚರಾಯ ಕಾಲೋನಿ ನಿವಾಸಿ ಕುಮಾರ ನಾಯ್ಕ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಪ್ರಾಣಿಗಳೊಂದಿಗೆ ರೀಲ್ಸ್ ಅಥವಾ ಮನರಂಜನೆಗಾಗಿ ಅನಗತ್ಯವಾಗಿ ಹತ್ತಿರವಾಗುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.
ಇದನ್ನೂ ಓದಿ > > ಚಾಕು ತೋರಿಸಿ ದರೋಡೆ, ಇಬ್ಬರನ್ನು ಬಂಧಿಸಿದ ಪೊಲೀಸರು!














