ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಇಂದು ಮುಂಜಾನೆ ಭೀಕರ ಅಗ್ನಿ ಅನಾಹುತ ಸಂಭವಿಸಿದೆ.
ಮುಖ್ಯ ರಸ್ತೆಯಲ್ಲಿರುವ ‘ರೇಂಜ್ 1’ ಎಂಬ ಪ್ರಸಿದ್ಧ ಬಟ್ಟೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿ ಉರಿದಿದ್ದು, ಇಡೀ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ > > ಚಾಕು ತೋರಿಸಿ ದರೋಡೆ, ಇಬ್ಬರನ್ನು ಬಂಧಿಸಿದ ಪೊಲೀಸರು!
ಮುಂಜಾನೆ ಸುಮಾರು 5:30ರ ವೇಳೆಗೆ ಅಂಗಡಿಯಿಂದ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿವೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರಾದರೂ, ಬೆಂಕಿಯ ತೀವ್ರತೆಗೆ ಕೆಲವೇ ನಿಮಿಷಗಳಲ್ಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳೆಲ್ಲವೂ ಭಸ್ಮವಾಗಿವೆ.
ಇದನ್ನೂ ಓದಿ > > ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಅಪಘಾತ, ಬಸ್–ಗೂಡ್ಸ್ ವಾಹನಗಳ ಮುಂಭಾಗ ಜಖಂ!
ಈ ಅಂಗಡಿಯು ರಹೀಮ್ ಎಂಬುವವರಿಗೆ ಸೇರಿದ್ದು, ಮುಂಬರುವ ಈದ್ ಮಿಲಾದ್ ಹಬ್ಬಕ್ಕಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಹೊಸ ಬಟ್ಟೆಗಳ ಸ್ಟಾಕ್ ತರಿಸಲಾಗಿತ್ತು. ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಉದ್ಯಮಿಗೆ ಈ ದುರಂತ ದೊಡ್ಡ ಆಘಾತ ತಂದೊಡ್ಡಿದೆ. ಬೆಂಕಿ ಅವಘಡದಿಂದ ಅಪಾರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, ಪ್ರೀ-ಪೇಯ್ಡ್ ದರಕ್ಕಿಂತ ಹೆಚ್ಚುವರಿ ಹಣದ ಬೇಡಿಕೆ, ಆಟೋ ವಶ, ಕೇಸ್ ದಾಖಲು!














