ಬೆಂಗಳೂರು/ಶಿವಮೊಗ್ಗ: ಪ್ರೀತಿ ಹೆಸರಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಾ ದೈಹಿಕ ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಯುವತಿಗೆ ಸಹಪಾಠಿಯೊಬ್ಬ ನೀಡುತ್ತಿದ್ದ ಕಾಟ ತಡೆಯಲಾಗದೆ ಯುವತಿ ಯೋರ್ವಳು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಂಜನ (ಹೆಸರು ಬದಲಿಸಲಾಗಿದೆ) (22) ಆತ್ಮಹತ್ಯೆಗೆ ಶರಣಾದ ದುರ್ದೈವಿ. ನಿನ್ನೆ ನಗರದ ಎಚ್ಎಸ್ಆರ್ ಲೇಔಟ್ನಲ್ಲಿರುವ ಅಗ್ರ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ > > ಚಾಕು ತೋರಿಸಿ ದರೋಡೆ, ಇಬ್ಬರನ್ನು ಬಂಧಿಸಿದ ಪೊಲೀಸರು!
ಉದ್ಯೋಗ ಮಾಡುತ್ತಿದ್ದಳೀ ಯುವತಿ:
ಕಾಲೇಜು ದಿನಗಳಲ್ಲಿ ಸಂಜನ (ಹೆಸರು ಬದಲಿಸಲಾಗಿದೆ) ಹಾಗೂ ಆರೋಪಿ ಅಭಿಷೇಕ್ ಸ್ನೇಹದಲ್ಲಿದ್ದರೂ. ಸುಮಾರು ಒಂದು ವರ್ಷದ ಹಿಂದೆ ವಾಣಿ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾ, ಸ್ವಾವಲಂಬಿ ಜೀವನ ನಡೆಸುತ್ತಿದ್ದರು.
ಆತ್ಮಹತ್ಯೆಗೂ ಮುನ್ನ ಆಕೆ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಆಲೂರು ಸ್ವಾಮಿ ಅವರ ಪುತ್ರ ಅಭಿಷೇಕ್ ಎಂಬಾತನೇ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಕಾಲೇಜು ದಿನಗಳ ಪರಿಚಯವನ್ನು ಇಟ್ಟುಕೊಂಡು ಅಭಿಷೇಕ್, ಯುವತಿಯ ವಾಟ್ಸಾಪ್ಗೆ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ರೂಮಿಗೆ ಬಾ ಎಂದು ವಿಕೃತವಾಗಿ ಪೀಡಿಸುತ್ತಿದ್ದ ಎಂದು ಯುವತಿ ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ನಮ್ಮ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಅಭಿಷೇಕ್ ನೀಡುತ್ತಿದ್ದ ಮಾನಸಿಕ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗದಾಗ ಹಾಗೂ ಈ ವಿಷಯ ಹೊರಬಂದರೆ ತನ್ನ ಕುಟುಂಬದ ಮರ್ಯಾದೆ ಹರಾಜಾಗುತ್ತದೆ ಎಂಬ ಭೀತಿಯಿಂದ ಯುವತಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ > > ಶಿರಾಳಕೊಪ್ಪ, ಭೀಕರ ಅಗ್ನಿ ಅನಾಹುತ, ಸುಟ್ಟು ಕರಕಲಾದ ಬಟ್ಟೆ ಅಂಗಡಿ!
“ನನ್ನ ಸಾವಿಗೆ ಕಾರಣನಾದ ಅಭಿಷೇಕ್ಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಡೆತ್ ನೋಟ್ನಲ್ಲಿ ಯುವತಿ ಆಕ್ರೋಶ ಹೊರಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಎಚ್ಎಸ್ಆರ್ ಲೇಔಟ್ ಪೊಲೀಸರು ಯುವತಿಯ ಮೃತದೇಹವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಲಭ್ಯವಿರುವ ಡೆತ್ ನೋಟ್ ಹಾಗೂ ಮೊಬೈಲ್ ಚಾಟ್ಗಳ ಆಧಾರದ ಮೇಲೆ ತಲೆಮರೆಸಿಕೊಂಡಿರುವ ಆರೋಪಿ ಅಭಿಷೇಕ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ > > ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಅಪಘಾತ, ಬಸ್–ಗೂಡ್ಸ್ ವಾಹನಗಳ ಮುಂಭಾಗ ಜಖಂ!














