ಶಿವಮೊಗ್ಗ: ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ (ಮಂತ್ರಾಲಯದ ಶಾಖಾ)ಮಠದ ವತಿಯಿಂದ ಶಿವಮೊಗ್ಗ ನಗರದ ದೇವಂಗಿ ರತ್ನಾಕರ ಬಡಾವಣೆ 2ನೇ ಹಂತ, ಬೊಮ್ಮನಕಟ್ಟೆ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 29ರಿಂದ 31, 2026ರವರೆಗೆ ಭಕ್ತಿಭಾವ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಇದನ್ನೂ ಓದಿ > > ಶಿವಮೊಗ್ಗ | ತಾಯಿ, ಮಕ್ಕಳು ತುಂಗಾ ನದಿಗೆ ಜಿಗಿದ ಕೇಸ್‌ಗೆ ಟ್ವಿಸ್ಟ್: ತಾಯಿ ಹೇಳಿದ್ದೇನು?
ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ಪೂಜೆ, ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ಮಹಾರಥೋತ್ಸವ ಹಾಗೂ ರಾಜಬೀದಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 29 – ಶ್ರೀ ಗುರುರಾಯರ ಪೂರ್ವಾರಾಧನೆ
ಆಗಸ್ಟ್ 29ರ ಶನಿವಾರ (ಪ್ರತಿಪದ) ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10 ಗಂಟೆಗೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ನಡೆಯಲಿದೆ.
ಆಗಸ್ಟ್ 30 – ಶ್ರೀ ಗುರುರಾಯರ ಮಧ್ಯಾರಾಧನೆ
ಆಗಸ್ಟ್ 30ರ ಭಾನುವಾರ (ದ್ವಿತೀಯ) ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, ಬೆಳಿಗ್ಗೆ 7 ಗಂಟೆಗೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10 ಗಂಟೆಗೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಆಗಸ್ಟ್ 31 – ಶ್ರೀ ಗುರುರಾಯರ ಉತ್ತರಾರಾಧನೆ ಹಾಗೂ ಮಹಾರಥೋತ್ಸವ
ಆಗಸ್ಟ್ 31ರ ಸೋಮವಾರ (ತೃತೀಯ) ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, ಬೆಳಿಗ್ಗೆ 7 ಗಂಟೆಗೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಗುರುರಾಘವೇಂದ್ರ ರಾಯರ ವಿಶೇಷಾಲಂಕೃತ “ರಾಜಬೀದಿ ಉತ್ಸವ” ವಿಜೃಂಭಣೆಯಿಂದ ನಡೆಯಲಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಮಠದ ಪ್ರಾಕಾರದಲ್ಲಿ ಮಹಾರಥೋತ್ಸವ ನೆರವೇರಲಿದೆ. ನಂತರ ಡೋಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ನೈವೇದ್ಯ ಹಾಗೂ ತೀರ್ಥ ಪ್ರಸಾದ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ದಿ.29.08.2026 ರ ಶನಿವಾರ ಸಂಜೆ 5.00 ಕ್ಕೆ ಕುಮಾರಿ ಪ್ರಜ್ಞಾ ಹಾಗೂ ಶ್ರೀಮತಿ ರಶ್ಮಿ ರಾಘವೇಂದ್ರ ರವರಿಂದ ಭಾರತ ನಾಟ್ಯ.
ದಿ. 30.08.2026 ರ ಭಾನುವಾರ ಸಂಜೆ 5.00 ಕ್ಕೆ ಶ್ರೀ ಸರಸ್ವತಿ ವಿದ್ಯಾಲಯ ವತಿಯಿಂದ ವೀಣಾವಾದನ
31.08.2026ರ ಸೋಮವಾರ ಸಂಜೆ ಸಂಜೆ 5.00 ಗಂಟೆಗೆ ಇಂಪು ಮ್ಯೂಸಿಕಲ್ ಕ್ರಿಯೆಟರ್ಸ್ ಇವರಿಂದ ದಾಸ ವೈಭವ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ
ಈ ಪವಿತ್ರ ಆರಾಧನಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು. ಅಲ್ಲದೆ, ತನು-ಮನ-ಧನದೊಂದಿಗೆ ಕಾರ್ಯಕ್ರಮಗಳಿಗೆ ಸಹಕರಿಸಿ ಶ್ರೀ ಗುರುರಾಯರ ಅನುಗ್ರಹ ಪಡೆಯಬೇಕೆಂದು ಮಠದ ವ್ಯವಸ್ಥಾಪಕರಾದ ಶ್ರೀ ದಿರೇಂದ್ರ ಆಚಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಶಿವಮೊಗ್ಗ | ಶಿವಮೊಗ, 3ನೇ ದಿನಕ್ಕೆ ಕಾಲಿಟ್ಟ ಶೋಧ, ಪತ್ತೆಯಾಗದ ಇಬ್ಬರು ಮಕ್ಕಳ ಸುಳಿವು!














