ಶಿವಮೊಗ್ಗ: 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಗಾಜನೂರಿನ ತುಂಗಾ ಜಲಾಶಯವು ತ್ರಿವರ್ಣ ಬೆಳಕಿನಲ್ಲಿ ಕಂಗೊಳಿಸುತ್ತಿದೆ.
ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಎಲ್‌ಇಡಿ ದೀಪಾಲಂಕಾರದಿಂದ ಅಣೆಕಟ್ಟು ಭವ್ಯವಾಗಿ ಮೈದಳೆದಿದೆ.
ಇದನ್ನೂ ಓದಿ > >ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ!
ರಾತ್ರಿ ವೇಳೆಯಲ್ಲಿ ಜಲಾಶಯದ ನೀರಿನ ಮೇಲೆಯೇ ತ್ರಿವರ್ಣದ ಕಾಂತಿ ಬಿಂಬಿತವಾಗಿದ್ದು, ಕತ್ತಲಿನಲ್ಲಿ ಮಲೆನಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ನಯನಮನೋಹರ ದೃಶ್ಯವನ್ನು ನೋಡಲು ಜಲಾಶಯದ ಬಳಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಜನರು ಅತ್ಯಾಕರ್ಷಕ ದೀಪಾಲಂಕಾರದ ಸೌಂದರ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಹಾಗೂ ವೀಡಿಯೋಗಳ ಮೂಲಕ ಸೆರೆಹಿಡಿದು ಸಂಭ್ರಮಿಸಿದರು.















