ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಬಳಿಯ ವರದಾ ನದಿಗೆ ಹಾರಿ, ತಾಯಿ ಮಗಳು ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಯುವಕರ ಸಮಪ್ರಜ್ಞೆಯಿಂದ ತಾಯಿ ಹಾಗು ಮಗಳು ಇಬ್ಬರು ಸಾವಿನಿಂದ ಪಾರಾಗಿದ್ದಾರೆ.
ಇದನ್ನೂ ಓದಿ > >ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ!
ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನದಿಗೆ ತಳ್ಳುವಾಗ ಮಗಳ ಅಳು ಕೇಳಿ ಯುವಕರು ಓಡಿ ಬಂದಿದ್ದಾರೆ. ತಾಯಿ ಮಗಳನ್ನು ಸಾಹಿಲ್, ಸೋನು ಮತ್ತು ಯಾಸಿನ್ ಎನ್ನುವ ಯುವಕರು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ > > ತ್ರಿವರ್ಣ ಬೆಳಕಿನಲ್ಲಿ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ
ಯುವಕರ ಸಮಯ ಪ್ರಜ್ಞೆ, ಮಾನವೀಯತೆಗೆ ಜಿಲ್ಲಾ ಪೊಲೀಸ್ ಹಾಗೂ ಸೊರಬ ಪೊಲೀಸ್ ಠಾಣೆ ವತಿಯಿಂದ ಯುವಕರನ್ನು ಗೌರವಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ > > ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಜೀವ ರಕ್ಷಿಸಿದ 112 ಸಿಬ್ಬಂದಿ!
ಈ ಸಂದರ್ಭದಲ್ಲಿ ಸಿಪಿಐ ಸೊರಬ ವೃತ್ತ ಹಾಗೂ ಪಿಎಸ್‌ಐ ಸೊರಬ ಪೊಲೀಸ್ ಠಾಣೆ ರವರು ಉಪಸ್ಥಿತರಿದ್ದರು.















