ಸಾಗರ : ಪಟ್ಟಣದ ಜಂಬಗಾರು ಬಡಾವಣೆಯ ಸರ್ವೇ ನಂ. 63ರ 4 ಎಕರೆ ಭೂಮಿ ಅನಧಿಕೃತವಾಗಿ ಖಾತೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ನಗರಸಭೆಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಇದನ್ನೂ ಓದಿ > > ಶಾಲೆಯಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಸಾವು!, ಪೋಷಕರ ಆಕ್ರಂದನ
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿ.ವೈ.ಎಸ್.ಪಿ. ಚಂದ್ರಶೇಖರ್, ನಗರಸಭೆ ವ್ಯಾಪ್ತಿಯ ಜಂಬಗಾರು ಬಡಾವಣೆಯ ಸರ್ವೇ ನಂ. 63ರಲ್ಲಿ ಅಶ್ವತ್ಥನಾರಾಯಣ ಎಂಬ ಮೂಲವ್ಯಕ್ತಿಯ ಹೆಸರಿನಲ್ಲಿದ್ದ 4 ಎಕರೆ ಭೂಮಿಯನ್ನು ಶರಾವತಿ ಜನಾಭಿವೃದ್ದಿ ಸಂಸ್ಥೆ ಹೆಸರಿಗೆ ರಿಜಿಸ್ಟರ್ ಆಗಿತ್ತು. ಭೂಮಿ ಖಾಲಿ ಇರುವುದನ್ನು ಗಮನಿಸಿದ ಅನಿಲಕುಮಾರ್ ಎಂಬಾತ ತಮ್ಮ ಹೆಸರಿಗೆ ಅಶ್ವತ್ಥನಾರಾಯಣ ಜಿಪಿಎ ಮಾಡಿಕೊಟ್ಟಿದ್ದಾರೆಂದು ನಗರಸಭೆಗೆ ನಕಲಿ ದಾಖಲೆ ನೀಡಿ ನಿವೇಶನವನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ > > ಟೆಂಪೋ ಪಲ್ಟಿ, ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾದ ಟೊಮೆಟೊ!
ನಿವೇಶನ ಅಕ್ರಮ ನಡೆದಿರುವ ಮಾಹಿತಿಯನ್ನು ಗಮನಿಸಿ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೀಗ ಅಗತ್ಯ ಮಾಹಿತಿ ಕಲೆ ಹಾಕಲು ಸೋಮವಾರ ನಗರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ > > ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಿಂದ ಕಳಚಿದ ಟಯರ್, ಕಳಚಿ ಬಿದ್ದದ್ದು ಹೇಗೆ?
ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ರುದ್ರೇಶ್, ವೀರಬಸಪ್ಪ, ಸಿಬ್ಬಂದಿಗಳಾದ ಟೀಕಪ್ಪ, ಮಂಝುನಾಥ್, ಸುರೇಂದ್ರ, ಆದರ್ಶ, ಚಂದ್ರಿಬಾಯಿ, ಅಂಜಲಿ, ಚೇತನ್, ಆನಂದ್ ಹಾಜರಿದ್ದರು.














