ಶಿವಮೊಗ್ಗ: ನಾಯಕತ್ವದ ಗುಣಗಳು ತರಬೇತಿ ಶಿಬಿರಗಳ ಬದಲಾಗಿ, ಪ್ರತಿದಿನದ ಕಾರ್ಯಕ್ಷೇತ್ರದಲ್ಲಿ ಸಿಗುವ ಹೊಸ ಅನುಭವ, ನಿರ್ಧಾರ, ಆತ್ಮಾವಲೋಕನದ ಮೂಲಕ ಬೆಳೆಯಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ಇದನ್ನೂ ಓದಿ > > ನಕಲಿ ಬಂಗಾರದ ನಾಣ್ಯ ನೀಡಿ ವಂಚನೆ, ನಗದು ಸಹಿತ ಆರೋಪಿ ವಶಕ್ಕೆ
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ, ಸಿವಿಲ್ ಇಂಜಿನಿಯರಿಂಗ್, ಎಂಬಿಎ ಮತ್ತು ಎಂಸಿಎ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ನಾಯಕತ್ವದ ಶ್ರೇಷ್ಠತೆಗೆ ಭದ್ರ ಬುನಾದಿ’ ಅಧ್ಯಾಪಕರ ವೃತ್ತಿ ಹಾಗೂ ಕಾರ್ಯನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಟ್ಟಡ ನಿರ್ಮಾಣಕ್ಕೆ ನಿಖರವಾದ ನಕ್ಷೆ ಅಗತ್ಯವಿರುವಂತೆ, ಸಂಸ್ಥೆಯ ಬೆಳವಣಿಗೆಗೂ ಸ್ಪಷ್ಟ ಗುರಿ ಮತ್ತು ದೂರದೃಷ್ಟಿಯ ಯೋಜನೆ ಅವಶ್ಯಕವಾಗಿದೆ. ಗುರಿ ಹೇಗಿರಬೇಕು ಎಂಬುದನ್ನು ಮೊದಲು ಮನಸ್ಸಿನಲ್ಲಿ ಕಟ್ಟಿಕೊಳ್ಳುವ ನಾಯಕನೇ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲ. ದೂರದೃಷ್ಟಿಯಿಲ್ಲದ ಕಾರ್ಯಗತಗೊಳಿಸುವಿಕೆ ಬುನಾದಿಯಿಲ್ಲದ ಕಟ್ಟಡದಂತಾಗುತ್ತದೆ.
ಇದನ್ನೂ ಓದಿ > > ರೂಪಕ್ಕಿಂತ ಗುಣವೇ ಆತ್ಮದ ಸ್ಪಂದನ : ಜಿ.ಎಸ್.ನಾರಾಯಣ ರಾವ್
ಆಧುನಿಕ ನಾಯಕತ್ವದಲ್ಲಿ ಮಾನಸಿಕ ಭದ್ರತೆ ಅತ್ಯಂತ ಪ್ರಮುಖ ಅಂಶವಾಗಿದೆ. ಸಿಬ್ಬಂದಿಯನ್ನು ಕೇವಲ ನಿಯಂತ್ರಣದಲ್ಲಿಡುವ ಬದಲು, ಅವರಲ್ಲಿ ವಿಶ್ವಾಸ ತುಂಬಿ. ಸವಾಲಿನ ಸಂದರ್ಭಗಳಲ್ಲಿ ನಾಯಕನೇ ಹೊಣೆ ಹೊತ್ತು ತಂಡಕ್ಕೆ ಬೆಂಬಲವಾಗಿ ನಿಲ್ಲಬೇಕು. ಅನುಭವದೊಂದಿಗೆ ನಾಯಕತ್ವ ಅರಳಲಿ ಎಂದು ಹೇಳಿದರು.
ಇದನ್ನೂ ಓದಿ > > ತೀರ್ಥಹಳ್ಳಿ, ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು!
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ರಮಣಿ ವೆಂಕಟ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಕಾರ್ತಿಕ್.ಬಿ.ಎಸ್, ಡಾ.ಹೇಮಂತ್ ಕುಮಾರ್, ಡಾ.ಸಿ.ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














