ಶಿವಮೊಗ್ಗ: ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಕ್ಬರ್ ಬೇಗ್ (40) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ > BMW ಕಾರಿನಲ್ಲಿ ಗಾಂಜಾ ಸಾಗಾಟ, ವಿನೋಬನಗರ ಪೊಲೀಸರ ದಾಳಿ, ಗಾಂಜಾ ವಶ
ಜುಲೈ 8ರಂದು ಕೃಷ್ಣ ಗ್ಯಾರೇಜ್ ರಸ್ತೆಯ ಮನೆಯೊಂದರ ಎದುರಿನ ಗೋಡೌನ್ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಬಂಧಿತನಿಂದ 7,500 ಮೌಲ್ಯದ 156 ಗ್ರಾಂ ಗಾಂಜಾ ಹಾಗೂ 25,000 ಮೌಲ್ಯದ 10 ಗ್ರಾಂ 750 ಮಿ.ಲಿ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ > ಮಳೆ ಬಿರುಗಾಳಿಗೆ ಹಾರಿ ಹೋದ ಮನೆಯ ಮೇಲ್ಛಾವಣಿ!
ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















