ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳ್ ಗ್ರಾಮದಲ್ಲಿ 14.5 ಅಡಿ ಉದ್ದದ 27.75 ಕೆ.ಜಿ ತೂಕದ ಬೃಹತ್ ಹೆಬ್ಬಾವು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಇದನ್ನೂ ಓದಿ > > ಸೆ.1ರಿಂದ ನಂಜಪ್ಪ ಲೈಫ್ ಕೇರ್ನಲ್ಲಿ ಮಂಡಿನೋವು ಉಚಿತ ತಪಾಸಣೆ ಶಿಬಿರ, ಶೇ 20 ರಷ್ಟು ವಿಶೇಷ ರಿಯಾಯಿತಿ!
ರಂಗಪ್ಪ ಗೌಡ ಅವರ ತೋಟದಲ್ಲಿ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಉರಗ ತಜ್ಞ ಚಂದ್ರು ಕೆ. ನಾಯರ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಚಂದ್ರು ಅವರು ಹೆಬ್ಬಾವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇದನ್ನೂ ಓದಿ > > ಬರ ಪೀಡಿತ ತಾಲೂಕುಗಳ ಪಟ್ಟಿ ಮತ್ತೊಮ್ಮೆ ಪರಿಶೀಲನೆ ಅಗತ್ಯ: ಸಿದ್ದಲಿಂಗಪ್ಪ ಎಂ.
2,000ಕ್ಕೂ ಹೆಚ್ಚು ಹಾವುಗಳ ರಕ್ಷಣೆ
ಇಷ್ಟೊಂದು ಭಾರವಾದ ಹೆಬ್ಬಾವನ್ನು ತಮ್ಮ ಕಾರ್ಯಚಟುವಟಿಕೆಯಲ್ಲಿ ಇದೇ ಮೊದಲ ಬಾರಿಗೆ ರಕ್ಷಿಸಿರುವುದಾಗಿ ಚಂದ್ರು ಕೆ. ನಾಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಇದುವರೆಗೆ 2,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ.
ಸ್ಥಳೀಯರ ಸಮಕ್ಷಮದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಚೀಲದಲ್ಲಿ ಬಂಧಿಸಿ, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ > > ಹೋಟೆಲ್, ಬೇಕರಿಗಳಿಗೆ ಎಸಿ-ತಹಶೀಲ್ದಾರ್ ದಿಢೀರ್ ಭೇಟಿ, 10 ದಿನಗಳ ಗಡುವು, ಕಾರಣವೇನು?














